Skip to main content

Posts

Showing posts from November, 2022
👇  ಮಗ ಓದುವ ಶಾಲೆಯ ವರ್ಷದ ಫೀಸ್ ಎಷ್ಟೆಂದು ತಿಳಿಸಿ ಬೇಸರ ಹೊರ ಹಾಕಿದ ದರ್ಶನ್! ಕಳೆದ ವರ್ಷ ಮಾರ್ಚ್ ತಿಂಗಳ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆಗೊಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಯಶಸ್ಸನ್ನು ಕೂಡ ಸಾಧಿಸಿತ್ತು. ಇದಾದ ಬಳಿಕ ದರ್ಶನ್ ಅಭಿನಯದ ಯಾವುದೇ ಚಿತ್ರ ಕೂಡಾ ತೆರೆಗೆ ಬಂದಿಲ್ಲ. ಸದ್ಯ ಈ ವರ್ಷವೂ ಸಹ ಮುಗಿಯುವ ಹಂತಕ್ಕೆ ತಲುಪಿದ್ದು, ಡಿಸೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದ್ದ ದರ್ಶನ್ ಅಭಿನಯದ ಮುಂದಿನ ಚಿತ್ರ ಕ್ರಾಂತಿ ಜನವರಿ 26ಕ್ಕೆ ಮುಂದೂಡಲ್ಪಟ್ಟಿದೆ. ಹೌದು, ಈ ಮೊದಲು ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ ಎಲ್ಲಾ ಅಂದುಕೊಂಡಂತೆ ಅಚ್ಚುಕಟ್ಟಾಗಿ ನಡೆದಿದ್ದರೆ ದರ್ಶನ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕ್ರಾಂತಿ ಚಿತ್ರ ಇದೇ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಳ್ಳಬೇಕಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವ ಕಾರಣ ಚಿತ್ರ ಮುಂದಿನ ವರ್ಷದ ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಅಪ್ಪಳಿಸಲಿದೆ ಎಂದು ಇತ್ತೀಚೆಗಷ್ಟೇ ಕ್ರಾಂತಿ ಚಿತ್ರತಂಡ ಯೂ ಟ್ಯೂಬರ್ಸ್ ಹಾಗೂ ಟ್ರೋಲ್ ಪೇಜ್‍ಗಳನ್ನು ಕರೆಸಿ ಕಾರ್ಯಕ್ರಮ ಮಾಡುವುದರ ಮೂಲಕ ಬಹಿರಂಗಪಡಿಸಿತು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್ ಕ್ರಾಂತಿ ಚಿತ್ರದ ಕುರಿತು ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಕ್ರಾಂತ...